water

water

Backward Classes Peoples Having Drinking Water Problem in Kanpur

3m ago
SOURCE  

Tags

Description

TV9 - Backward Classes Peoples Having Drinking Water Problem in Kanpur ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka TV9 - Backward Classes Peoples Having Drinking Water Problem in Kanpur ಕುಡಿಯುವ ನೀರಿಗಾಗಿ ಪ್ರತಿಭಟಿಸಿದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿರೋ ವಿಚಾರ ಸಂಬಂಧ ಇಂದು ಬೆಳಗಾವಿಯ ಖಾನಾಪುರ ಠಾಣೆಯ ಪೊಲೀಸರ ನೇತೃತ್ವದಲ್ಲಿ ದಲಿತರು-ಸವರ್ಣೀಯರ ಸಂಧಾನ ಸಭೆ ನಡೆಸಲಾಯ್ತು. ಉಪವಿಭಾಗಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮಾ ಸಾಲಿಗೌಡರ, ಖಾನಾಪುರ ತಹಶೀಲ್ದಾರ್​ ಎಮ್.ಎನ್​. ಬಳಿಗಾರ್ ಗ್ರಾಮಕ್ಕೆ ಭೇಟಿ ನೀಡಿದ್ದು, ಸಂಧಾನ ಸಭೆ ವೇಳೆ ಅಸ್ಪೃಶ್ಯತೆ ಆಚರಣೆ ನಿಲ್ಲಿಸಲು ಗ್ರಾಮಸ್ಥರಿಗೆ ಖಡಕ್ ಸೂಚನೆ ಕೊಡಲಾಯ್ತು. ಅಲ್ಲದೆ ಅಧಿಕಾರಿಗಳು ಸವರ್ಣೀಯರಿಗೆ ಗ್ರಾಮದಲ್ಲಿ ಸೌಹಾರ್ದಯುತವಾಗಿ ವಾತಾವರಣ ನಿರ್ಮಾಣ ಮಾಡಲು ಒಂದು ತಿಂಗಳ ಗಡುವು ಕೊಟ್ಟಿದ್ದಾರೆ. ಒಂದು ತಿಂಗಳ ಒಳಗೆ ಸರಿಪಡಿಸದಿದ್ದಲ್ಲಿ ಕೇಸ್ ಹಾಕಲಾಗುತ್ತೆ ಅಂತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. --------------- ಖಾನಾಪೂರ ತಾಲೂಕಿನ ಕಸಬಾ ನಂದಗಡ ಗ್ರಾಮದಲ್ಲಿ ಕುಡಿಯಲು ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಅಂತಾ ದಲಿತರು ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಗ್ರಾಮ ಪಂಚಾಯತ್​ನಿಂದ ಕೊರೆಸಲಾಗಿದ್ದು ಬೋರ್​ವೆಲ್ ಪಾಳು ಬಿದ್ದಿತ್ತು. ಹೀಗಾಗಿ ಬೋರ್​ವೆಲ್ ಸರಿಪಡಿಸಿ ನಮಗೆ ನೀರು ಒದಗಿಸಿ ಅಂತಾ ದಲಿತರು ಪ್ರತಿಭಟನೆ ನಡೆಸಿದ್ದರು. ಇದೇ ದೊಡ್ಡ ತಪ್ಪು ಎನ್ನುವ ರೀತಿಯಲ್ಲಿ ಗ್ರಾಮಸ್ಥರೆಲ್ಲಾ ಸೇರಿಕೊಂಡು ದಲಿತರಿಗೆ ಬಹಿಷ್ಕಾರ ಹಾಕಿದ್ದರು. ಕಳೆದ ಒಂದೂವರೆ ವರ್ಷದಿಂದ ಗ್ರಾಮದಲ್ಲಿ ಇವರಿಗೆ ಕುಡಿಯಲು ನೀರು ಪೂರೈಕೆ ಮಾಡುತ್ತಿಲ್ಲ. ಗ್ರಾಮದಲ್ಲಿನ ಕಿರಾಣಿ ಶಾಪ್, ಗಿರಣಿಗಳು ಹಾಗೂ ದೇವಾಲಯ ಪ್ರವೇಶವನ್ನ ನಿಷೇಧಿಸಿದ್ದಾರೆ. ಸಾಲದ್ದಕ್ಕೆ ಇವರಿಗೆ ಯಾರೂ ಕೂಲಿ ನೀಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಸವರ್ಣೀಯರು ಯಾರಾದ್ರು ಇವರ ಜೊತೆಗೆ ಮಾತನಾಡಿದ್ದು ಗೊತ್ತಾದ್ರೆ ಅವರಿಗೆ ದಂಡವಿಧಿಸುವ ಅಮಾನವೀಯ ಸಂಪ್ರದಾಯವನ್ನ ಒಂದೂವರೆ ವರ್ಷದಿಂದ ಮುಂದುವರೆಸಿಕೊಂಡು ಬರಲಾಗಿತ್ತು.